ನನ್ನೊಲವ ಮಂದಿರದಿ ಚಂದಿರನ ಮುಖ ಬಂದು
ಬೆಳದಿಂಗಳ ಆಸೆ ಎಬ್ಬಿಸಿ ಮರೆಯಾಯಿತು.
ಕಲ್ಪನೆಯ ಕಡಲಲ್ಲಿ ಕನಸುಗಳ ತಂದು
ಸೊಗಸಾದ ಆಸೆಗಳ ಅಲೆಯ ತರಿಸಿ ಕಾಣದಾಯಿತು.
ಎಲ್ಲೆಂದು ಹುಡುಕಲಿ ಅವನ
ಈ ಕಪ್ಪು ಕತ್ತಲ ನಿಲಯದಲ್ಲಿ,
ಆ ಚಪಲ ಚಂದಿರನ ನಾ ನಿಡುವೆ
ನನ್ನೀ ಹೃದಯದ ಆಲಯದಲ್ಲಿ.
ನನ್ನಾಸೆಯ ಚಂದಿರನಿಲ್ಲದ
ಪ್ರತಿ ರಾತ್ರಿಯೂ ನನಗೆ ಮೌನ,
ತುಂತುರು ಮಳೆ ಹನಿಗಳ ನಡುವೆಯೂ
ಅವನದೇ ದ್ಯಾನ.......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ