ಮಂಗಳವಾರ, ಮೇ 28, 2019

ತುತ್ತಾ?.... ಮುತ್ತಾ?....... (ತಾಯಿ ಮತ್ತು ಹೆಂಡತಿಯ ನಡುವಿನ ಉತ್ತಮ ಭಾಂಧವ್ಯದಲ್ಲಿ ಗಂಡಸಿನ ಪಾತ್ರ )

ತುತ್ತಾ?.......   ಮುತ್ತಾ?........ 


ಮದುವೆಯಾದ ಪ್ರತಿಯೊಬ್ಬ ಗಂಡಸಿನ ಮನಸಿನಲ್ಲಿ ಉದ್ಬವಿಸುವ ಮೊದಲ ಪ್ರಶ್ನೆ ಹೆಂಡತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೋ ಆಥವಾ ತನ್ನ ತಾಯಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೋ ಎಂಬುದು. ಇಲ್ಲಿ ಗಂಡಸು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಇಬ್ಬರೂ ಕೂಡ ಸಮಾನರೇ, ಯಾರೂ ಹೆಚ್ಚೂ ಅಲ್ಲ, ಹಾಗೆಯೇ ಯಾರೂ ಕೂಡ ಕಡಿಮೆಯಲ್ಲ. ಇಬ್ಬರೂ ಕೂಡ ಅವರವರ ಜವಾಬ್ದಾರಿಗಳನ್ನು ನಿಭಾಯಿಸಿರುತ್ತಾರೆ. ಆದರೆ ಗಂಡಸು ಮಾತ್ರ ತನ್ನ ಜವಾಬ್ದಾರಿಯನ್ನು ನಿಬಾಯಿಸುವುದರಲ್ಲಿ ವಿಫಲನಾಗುತ್ತಾನೆ.
ಕಾರಣ ಎರಡೇ.
ಒಂದು, ತನ್ನ ಹೆಂಡತಿಯ ಮೇಲಿರುವ ಅತಿಯಾದ ಪ್ರೀತಿ, ಇನ್ನೊಂದು ತನ್ನ ತಾಯಿಯ ಮೇಲಿರುವ ಅತಿಯಾದ ಗೌರವ, ಅಭಿಮಾನ. ಹೌದು ಸಾಮಾನ್ಯವಾಗಿ ನೋಡುವುದಾದರೆ ತನ್ನ ಪತ್ನಿಯನ್ನು ಹುಚ್ಚನಂತೆ ಪ್ರೀತಿಸುವ ಗಂಡ ಎಲ್ಲೋ ಒಂದು ಕಡೆ ತಾಯಿಯ ಮನಸ್ಸಿಗೆ ಬೇಸರವನ್ನು ತಂದಿರುತ್ತಾನೆ. ಹಾಗೆಯೇ ತಾಯಿಯ ಮೇಲಿರುವ ಅತಿಯಾದ ಗೌರವ ಕೂಡ ಕೆಲವೊಮ್ಮೆ ಹೆಂಡತಿಗೆ ನೋವನ್ನುಂಟು ಮಾಡಬಹುದು. ಇದರ ಅರ್ಥ ಯಾರನ್ನೂ ಪ್ರೀತಿಸಬಾರದು ಎಂದಲ್ಲ. ಬದಲಾಗಿ ಇಬ್ಬರಿಗೂ ಅವರಿಬ್ಬರೂ ಕೂಡ ತನಗೆಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಡಬೇಕು. 
ಉದಾಹರಣೆಗೆ ಮದುವೆಯಾದ ಹೊಸತರಲ್ಲಿ  ಹೆಂಡತಿಯ ಜೊತೆ ಪ್ರೀತಿ ಪ್ರೇಮಗಳ ಬಗ್ಗೆ ಮಾತಾನಾಡುವುದರ ಜೊತೆಗೆ, ನಿಮ್ಮ ಜೀವನದಲ್ಲಿ  ತಾಯಿಯ ಪ್ರಾಮುಖ್ಯತೆಯನ್ನು ತಿಳಿಸಿ, ನಿಮ್ಮ ಏಳಿಗೆಯಲ್ಲಿ ಆಕೆಯ ಪಾತ್ರವನ್ನ ವಿವರಿಸಿ ಹೇಳಿ, ಜೊತೆಗೆ ನೀವು ಆಕೆಯನ್ನು ಎಷ್ಟು ಇಷ್ಟಪಡುತ್ತೀರ, ನಿಮ್ಮ ತಾಯಿಗೆ ನಿಮ್ಮ ಅವಷ್ಯಕತೆ  ಎಷ್ಟಿದೆ ಎಂಬುದನ್ನು ಅರ್ಥವಾಗುವ ರೀತಿಯಲ್ಲಿ ಹೇಳಿ, ಸಾದ್ಯವಾದರೆ ನಿಮ್ಮ ಹೆಂಡತಿಯ ಬಗ್ಗೆ ನಿಮ್ಮ ತಾಯಿಗಿರುವ ಓಳ್ಳೆಯ ಅಭಿಪ್ರಾಯಗಳು, ತನ್ನ ಸೊಸೆಯ ಬಗ್ಗೆ ಆಕೆ ಕಂಡಿರುವ ಕನಸುಗಳ ಬಗ್ಗೆ ವಿವರಿಸಿ, ಖಂಡಿತವಾಗಿಯೋ ಕೂಡ ನಿಮ್ಮನ್ನು  ಪ್ರೀತಿಸುವ ನಿಮ್ಮ ಪತ್ನಿ ನಿಮ್ಮ ತಾಯಿಯನ್ನೂ ಕೂಡ ಗೌರವಿಸುತ್ತಾಳೆ, ಆಕೆಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನ ಬೆಳೆಸಿಕೊಳ್ಳುತ್ತಾಳೆ .
ಹಾಗೆಯೇ ನಿಮ್ಮ ತಾಯಿಯ ಬಳಿಯೂ  ಕೂಡ ಹೆಂಡತಿ ಬಗ್ಗೆ ಅಭಿಮಾನ ಬರುವಂತೆ ಮಾತನಾಡಿ, ಬಹಳ ಗಂಡಸರು ತಾಯಿಯ ಬಳಿ ಹೆಂಡತಿಯನ್ನು ದೂರುವುದರಲ್ಲಿಯೇ ಕಾಲ ಕಳೆಯುತ್ತಾರೆ, ಹೆಂಡತಿ ಮಾಡುವ ಚಿಕ್ಕ ಪುಟ್ಟ ತಪ್ಪುಗಳನ್ನು ಕೂಡ ತಾಯಿಯ ಬಳಿ ಹೇಳುತ್ತಾರೆ, ಆಕೆ ಅಡಿಗೆ ನೀನು ಮಾಡಿದ ಹಾಗೆ ರುಚಿಯಾಗಿರುವುದಿಲ್ಲ ಎನ್ನುವುದು, ದಿನಪೂರ್ತಿ  ಮೊಬೈಲನಲ್ಲೇ ಕಾಲ ಕಳೆಯುತ್ತಾಳೆ ಎನ್ನುವುದು, ನಿಮ್ಮ ಹೆಂಡತಿ ದಿನನಿತ್ಯದ ಕೆಲಸಗಳಲ್ಲಿ ನಿಮ್ಮಿಂದ ತೆಗೆದುಕೊಂಡ ಸಹಾಯಗಳ ಬಗ್ಗೆ ಹೇಳುವುದು, ಅಥವಾ ನಿಮ್ಮಿಬ್ಬರ ನಡುವಿನ ಜಗಳಗಳ ಬಗ್ಗೆ ಚರ್ಚಿಸುವುದು  . ಇವುಗಳೆಲ್ಲ ನಿಮ್ಮ ಮನಸ್ಸಿಗೆ ನಿಮ್ಮ ತಾಯಿಯ ಬಳಿ ಎಲ್ಲವನ್ನೂ ಹೇಳಿಕೊಂಡ ಸಮಾದಾನವನ್ನು ನೀಡಬಹುದು. ಆದರೆ ನಿಮ್ಮ ತಾಯಿಯ ಮನಸ್ಸಿನಲ್ಲಿ ತನ್ನ ಸೊಸೆ ಮಗನನ್ನು ಅವನಿಷ್ಟದಂತೆ ನೋಡಿಕೊಳ್ಳುತ್ತಿಲ್ಲವೆನ್ನುವ ನೋವು ನಿಮ್ಮ ಹೆಂಡತಿಯ ಮೇಲಿನ ದ್ವೇಷವಾಗಿ ಬದಲಾಗುತ್ತದೆ, ಒಂದು ದಿನ ಜಗಳವಾಡಿದರೆ ಮತ್ತೊಂದು ದಿನ ನಿಮ್ಮ ಹೆಂಡತಿಯೊಂದಿಗೆ ನೀವು ಸಂತೋಷವಾಗಿಯೇ ಇರುವಿರಿ. ಆದರೆ ಅತ್ತೆ ಸೊಸೆಯ ಮದ್ಯೆ ಇರುವ ಭಿನ್ನಾಭಿಪ್ರಾಯಗಳು ಮಾತ್ರ ಎಂದೂ ಸರಿಹೋಗುವುದಿಲ್ಲ.
ಆದರಿಂದ ತಾಯಿಯ ಬಳಿ ಎಂದಿಗೂ ನಿಮ್ಮಿಬ್ಬರ ಜಗಳ ಅಥವಾ ಮನಸ್ತಾಪಗಳ ಬಗ್ಗೆ ಪದೆ ಪದೆ ಮಾತನಾಡಬೇಡಿ. ನಿಮ್ಮ ಹೆಂಡತಿಯಿಂದಾದ ತಪ್ಪುಗಳನ್ನು ನಿಮ್ಮ ತಾಯಿಯ ಬಳಿ ದೂರು ಕೊಡಬೇಡಿ.  ಆಗ ನಿಮ್ಮ ತಾಯಿ ಮತ್ತು ನಿಮ್ಮ ಹೆಂಡತಿಯೊಂದಿಗೆ ನೆಮ್ಮದಿಯಾಗಿರುವಿರಿ.

ತಾಯಿ ನಿಮಗೆ ಜನ್ಮ ನೀಡಿದರೆ, ಹೆಂಡತಿ ನಿಮ್ಮ ಪ್ರತಿ ರೂಪಕ್ಕೆ ಜನ್ಮ ನೀಡುತ್ತಾಳೆ. ತಾಯಿಯಿಂದ ಜನ್ಮ ಹೆಂಡತಿಯಿಂದ ಜೀವನ. ಇಬ್ಬರೂ ಕೂಡ ಗಂಡಸಿಗೆ ಮುಖ್ಯ. ಹೆಂಡತಿಗಿಂತ ತಾಯಿಯೇ ಹೆಚ್ಚು ಮುಕ್ಯ ಎನ್ನುವುದು ಕೆಲವರ ಅಭಿಪ್ರಾಯ ಏಕೆಂದರೆ ಆಕೆ ತ್ಯಾಗಮಯಿ, ನಿಸ್ವಾರ್ಥಿ  ಎಂದು. ಅದು ಸತ್ಯವೇ, ಅದರೆ  ಹೆಂಡತಿಯೂ ಕೂಡ ತಾಯಿಯಾಗಬಲ್ಲಳು.
ಆದರೆ ಆಕೆಯನ್ನು ತಾಯಿಯ ಹಾಗೆ ಪ್ರೀತಿಸುವ, ಗೌರವಿಸುವ, ಸ್ವೀಕರಿಸುವ ಮನಸ್ಸು ಗಂಡಿಗೆ ಇರಬೇಕಷ್ಟೆ...... 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ತುತ್ತಾ?.... ಮುತ್ತಾ?....... (ತಾಯಿ ಮತ್ತು ಹೆಂಡತಿಯ ನಡುವಿನ ಉತ್ತಮ ಭಾಂಧವ್ಯದಲ್ಲಿ ಗಂಡಸಿನ ಪಾತ್ರ )

ತುತ್ತಾ?.......   ಮುತ್ತಾ?........  ಮದುವೆಯಾದ ಪ್ರತಿಯೊಬ್ಬ ಗಂಡಸಿನ ಮನಸಿನಲ್ಲಿ ಉದ್ಬವಿಸುವ ಮೊದಲ ಪ್ರಶ್ನೆ ಹೆಂಡತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕ...