Welcome to Antarala..........
ನಮಸ್ಕಾರ ಸ್ನೇಹಿತರೇ ,
ಅಂತರಾಳಕ್ಕೆ ಸ್ವಾಗತ.
ಬದುಕು ಎನ್ನುವುದು ಹುಟ್ಟು ಮತ್ತು ಸಾವಿನ ನಡುವೆ ನೆಡೆಯುವ ನಿರಂತರವಾದ ಪ್ರಕ್ರಿಯೆ. ಈ ಬದುಕು ನಿಂತಿರುವುದು ನಮ್ಮ ನಂಬಿಕೆ, ಭರವಸೆ ಮತ್ತು ನಿರ್ದಾರಗಳ ಮೇಲೆ. ಈ ನಂಬಿಕೆ, ಭರವಸೆ ಮತ್ತು ನಿರ್ದಾರಗಳು ಹುಟ್ಟುವುದು ನಮ್ಮ ಮನಸ್ಸಿನಲ್ಲಿಯೇ ಆದರೂ ಅವುಗಳನ್ನು ನಿಯಂತ್ರಿಸುವುದು ಮಾತ್ರ ನಮ್ಮ ಮೆದುಳು,
ಇಂದಿನ ಯಾಂತ್ರಿಕತೆಯ ಬದುಕಿನಲ್ಲಿ ನಮ್ಮ ಮನಸ್ಸಿನ ಅಂತರಾಳದ ಭಾವನೆಗಳಿಗೆ ಬೆಲೆಯೇ ಇಲ್ಲದಾಗಿದೆ. ನಮ್ಮ ಅಂತರಾಳ ಹೇಳುವುದೇ ಒಂದಾದರೆ ನಾವು ಮಾಡುವುದೇ ಇನ್ನೊಂದಾಗಿದೆ. ನಮ್ಮದೇ ಮನಸ್ಸಿನ ಬಾವನೆಗಳನ್ನ ನಮಗೇ ವ್ಯಕ್ತ ಪಡಿಸಲು ಸಮಯವಿಲ್ಲ. ಒಂದೊಮ್ಮೆ ಸಮಯವಿದ್ದರೂ ಸಮಾಜದ ಕಟ್ಟುಪಾಡುಗಳಿಗಾಗಿಯೋ ಅಥವಾ ನಮ್ಮ ಇನ್ಯಾವುದೋ ಮಿತಿಗಳಿಂದಲೋ ನಾವು ಅವುಗಳನ್ನು ನಮ್ಮ ಮನಸ್ಸಿನಲ್ಲಿಯೇ ಮುಚ್ಚಿಡುತ್ತೇವೆ.
ಅಂತಹ ನಮ್ಮ ಮನಸ್ಸಿನ ಅಂತರಾಳದ ಮೂಲೆಯಲ್ಲಿ ಅಡಗಿ ಕುಳಿತಿರುವ ಭಾವನೆಗಳನ್ನು ನನ್ನ ಕಲ್ಪನೆಯ ಅಕ್ಷರಗಳ (ಕಥೆ, ಕವನ) ಮೂಲಕವೋ ಅಥವಾ ನನ್ನ ಅಭಿಪ್ರಾಯ ಹಾಗು ಅನುಭವಗಳ ಮೂಲಕವೋ ಬರವಣೆಗೆಯ ರೂಪದಲ್ಲಿ ನಿಮ್ಮ ಮುಂದೆ ತರುವ ನನ್ನ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ ಎಂದು ಬಯಸುವ
ಇಂತಿ ನಿಮ್ಮ
ಅಂತರಾಳ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ